Thursday, August 18, 2016





-------------------------------------------------------------------------------------------

ನಮ್ಮ ಜ್ಞಾನವನ್ನೂ ಲೆಕ್ಕಿಸಿ, ನಮ್ಮ ಶ್ರಮವೊಂದನ್ನೇ ಗಣಿಸದಿರಿ!
ಕನಿಷ್ಠ ವೇತನ ಸಾಲದು, ಸರ್ಕಾರೀ ನೌಕರನ ಪಗಾರಕ್ಕೆ ಸಮಾನವಾದ ನ್ಯಾಯೋಚಿತ ಆದಾಯ ಬೇಕು!

ಆಹ್ವಾನ/ ಘೋಷಣೆ

16 ಅಕ್ಟೋಬರ್ 2016, ಹುಣ್ಣಿಮೆಯ ದಿನದಂದು,
ಬನ್ನಿ ವಾರಾಣಸಿಗೆ ಹೋಗೋಣ,
ಗಂಗಾ ನದಿಯ ತೀರದಲ್ಲಿ ಭೈಸಾಸುರ ಘಟ್ಟದಲ್ಲಿ ನಡೆವ

ರೈತ-ಕುಶಲ ಕಾರ್ಮಿಕರ ಮಹಾಪಂಚಾಯತಿಗೆ!

ವಾರಾಣಸಿಯ ಗಂಗಾನದಿಯ ತಟದಲ್ಲಿ ಭಾನುವಾರ, 16ನೇ ಅಕ್ಟೋಬರ ಹುಣ್ಣಿಮೆಯ ದಿನ, ಮಧಾಹ್ನ 12:೦೦ ಗಂಟೆಗೆ ಭೈಸಾಸುರ ಘಟ್ಟದಲ್ಲಿ (ರಾಜಘಾಟ್) ಒಂದು ಬೃಹತ್ ರೈತ ಮತ್ತು ಕುಶಲ ಕಾರ್ಮಿಕರ ಮಹಾಪಂಚಾಯತಿ ಏರ್ಪಟ್ಟಿದೆ. ಈ ಮಹಾಪಂಚಯತಿಯಲ್ಲಿ ಒಟ್ಟುಗೂಡುವ ದೇಶದ ವಿವಿಧ ಭಾಗದ ರೈತ ಮತ್ತು ಕುಶಲಕರ್ಮಿಗಳ ಸಂಘಟನೆಗಳು ಕೆಳಕಂಡ ಬೇಡಿಕೆಗಳನ್ನು ಪ್ರಸ್ತುತಗೊಳಿಸುವರು:

ದೇಶದ ಪ್ರತಿಯೊಬ್ಬ ರೈತ ಮತ್ತು ಕುಶಲಕರ್ಮಿಯೂ ಸರ್ಕಾರೀ ನೌಕರನಿಗೆ ಸಮನಾದ ಆದಾಯ ಪಡೆಯಬೇಕು!
ಮತ್ತು
ಈ ಆದಾಯವು ಸರ್ಕಾರಿ ವೇತನದ ಹಾಗೆಯೇ ನಿಶ್ಚಿತ ಮತ್ತು ಸ್ಥಿರವಾಗಿರಬೇಕು!
ಬನ್ನಿ, ಈ ಬೇಡಿಕೆಗೆ ನಿಮ್ಮ ದನಿಯನ್ನೂ ಸೇರಿಸಿ ಇದರ ಅಗ್ಗಳಿಕೆಯನ್ನು ಹೆಚ್ಚಿಸಿ!
 
ಕಳೆದ ಹಲವು ದಶಕಗಳಿಂದ ರೈತ ಮತ್ತು ಕುಶಲಕರ್ಮಿ ಸಮುದಾಯಗಳ ಶೋಷಣೆಯು ಹೆಚ್ಚುತ್ತಲೇ ಹೋಗುತ್ತಿದೆ. ಮಿತಿಮೀರಿದ ಬಡತನದೊಂದಿಗೆ ಅವರ ಸಂಪಾದನೆಯೂ ಕುಗ್ಗುತ್ತಲೇ ಹೋಗಿದೆ. ಇದರೊಂದಿಗೇ ರೈತ ಮತ್ತು ಕುಶಲಕರ್ಮ ವೃತ್ತಿಗಳ ಹಿನ್ನೆಲೆಯ ಆದಿವಾಸಿಗಳು ಮತ್ತು ಸಣ್ಣ ವ್ಯಾಪಾರಸ್ಥರನ್ನು ಕಾಡುಗಳಿಂದ ಮತ್ತು ಮಾರುಕಟ್ಟೆಗಳಿಂದ ಒಕ್ಕಲೆಬ್ಬಿಸಿ ಜೀವನಾಂಶವನ್ನು ಕಸಿದುಕೊಳ್ಳುವ ಕೆಲಸ ನಡೆಯುತ್ತಲೇ ಇದೆ. ಈ ಸಮುದಾಯಗಳ ಗಂಡು ಹೆಣ್ಣುಗಳು ತಮ್ಮ ವೃತ್ತಿಗಳಲ್ಲಿ ಜ್ಞಾನಿಗಳು ಮತ್ತು ತಜ್ಞರು. ಇವರ (ಲೋಕವಿದ್ಯೆಯೆಂದು ಕರೆಯಬಹುದಾದ) ಜ್ಞಾನವು ಯಾವುದೇ ವಿಶ್ವವಿದ್ಯಾಲಯದ ಕಲಿಕೆಗಿಂತ ಕೆಳಮಟ್ಟದ್ದೇನೂ ಅಲ್ಲ. ಎಲ್ಲಿಯವರೆಗೂ ಲೋಕವಿದ್ಯೆಗೆ ವಿಶ್ವವಿದ್ಯಾಲಯದ ವಿದ್ಯೆಗೆ ಸಮಾನವಾದ ದರ್ಜೆ ಸಿಗುವುದಿಲ್ಲವೋ, ಅಲ್ಲಿಯವರೆಗೂ ಈ ಸಮುದಾಯಗಳ ಶೋಷಣೆಯನ್ನು ಕೊನೆಗೊಳಿಸುವ ಮಾರ್ಗವು ತೆರೆಯುವುದಿಲ್ಲ. ಆದ್ದರಿಂದಲೇ ವಿಶ್ವವಿದ್ಯಾಲಯದಿಂದ ಉತ್ತೀರ್ಣರಾದ ಉದ್ಯೋಗಸ್ಥರಿಗೆ ಇಂತಿಷ್ಟು ಆದಾಯವು ನ್ಯಾಯಸಮ್ಮತವೆಂದು ಹೇಳಲಾಗುವ ರೀತಿಯಲ್ಲೇ ಲೋಕವಿದ್ಯೆಯನ್ನು ಅವಲಂಬಿಸಿ ಶ್ರಮಿಸುವರಿಗೂ ನ್ಯಾಯಬದ್ಧ ಆದಾಯವನ್ನು ನಿರ್ಧರಿಸಬೇಕು.

ಮೇಲೆ ಸೂಚಿಸಿದ ಮಾರ್ಗವನ್ನು ಬಹಿರಂಗಪಡಿಸಿ ದೃಢಗೊಳಿಸುವ ಕಾರ್ಯವೇ ನಮದಾಗಿದೆ!

2016ನೇ ಏಪ್ರಿಲ್ ತಿಂಗಳಿಂದ ಈ ಬೃಹತ್  ಸಭೆಯ ಪೂರ್ವಸಿದ್ಧತೆಗಳು ನಡೆಯುತ್ತಲಿವೆ – ಇದರ ಬಗ್ಗೆ ಹೆಚ್ಚಿನ ವಿವರಗಳನ್ನು 8, 16 ಮತ್ತು 18 ಏಪ್ರಿಲ್ ರಂದು ಪ್ರಕಟಿತವಾದ ಟಿಪ್ಪಣಿಗಳನ್ನು ಇದೇ ಬ್ಲಾಗ್ ನ (blog) ಭಾಗವಾಗಿ ನೋಡಬಹುದು. ಉತ್ತರ ಪ್ರದೇಶ, ಮಧ್ಯ ಪ್ರದೇಶ, ಮಹಾರಾಷ್ಟ್ರ, ಕರ್ನಾಟಕ, ತೆಲಂಗಾಣ, ಮತ್ತು ಆಂಧ್ರಗಳಲ್ಲಿ ರೈತರು ಮತ್ತು ಕುಶಲಕರ್ಮಿಗಳ ಸಂಘಟನೆಗಳೊಂದಿಗೆ ಮಾತುಕತೆ ಮತ್ತು ಆಯಾ ಕ್ಷೇತ್ರಗಳಲ್ಲಿ ಹಲವಾರು ಜ್ಞಾನಪಂಚಾಯತಿಗಳ ನಿರ್ವಹಣೆ ಈಗಾಗಲೇ ನಡೆಯುತ್ತಿವೆ. ಸೆಪ್ಟೆಂಬರ್ ತಿಂಗಳಲ್ಲಿ ಒಂದು ವಿಶಾಲವಾದ ಯೋಜನಾ/ನಿರ್ವಹಣಾ ಸಮಿತಿಯನ್ನು ರಚಿಸಲಾಗುವುದು. ಈ ಹೊತ್ತು ಮಹಾಪಂಚಾಯತಿಯ ಸಿದ್ಧತೆಗಳು ಮತ್ತು ಇದುವರೆವಿಗೂ ನಡೆದ ಕಾರ್ಯಗಳ ವಿವರಗಳನ್ನು ನಾವು ಮೂರು ಹಸ್ತಪ್ರತಿಗಳ ಮೂಲಕ ಪ್ರಕಟಿಸಿದ್ದೇವೆ. ಕೆಳಗೆ ಕಾಣುವ ಲಿಂಕ್ (link) ಗಳ ಮೂಲಕ ಈ ಹಸ್ತಪ್ರತಿಗಳನ್ನು ನೀವು ಓದಬಹುದು. ಬರುವ ದಿನಗಳಲ್ಲಿ ಮತ್ತೂ ಕೆಲವು ಹಸ್ತಪ್ರತಿಗಳನ್ನು ಪ್ರಕಟಿಸುವ ನಮ್ಮ ಯೋಜನೆಯು ಕಾರ್ಯಗತವಾಗಲಿದೆ.


ಈ ಕರೆಪತ್ರದಲ್ಲಿ ಸೂಚಿತವಾದ ಬೇಡಿಕೆಗಳ ವೈಚಾರಿಕ ಮತ್ತು ಸಾಮಾಜಿಕ ಹಿನ್ನೆಲೆ ಮತ್ತು ತಾತ್ವಿಕ ಆಧಾರಗಳನ್ನು ಒಂದು ಪುಸ್ತಕದ ರೂಪದಲ್ಲಿ ಪ್ರಕಟಿಸಲಾಗಿದೆ (ಕೆಳಗೆ ತೋರುವ ಲಿಂಕ್ ನ ಮೂಲಕ ಈ ಹಿಂದಿಯಿಂದ ಅನುವಾದಿತವಾದ ಪುಸ್ತಕವನ್ನು ಓದಬಹುದು).

ನಿಮ್ಮಲ್ಲೊಂದು ಪ್ರಾರ್ಥನೆ
ದೇಶದ ಎಲ್ಲೆಡೆಯಲ್ಲಿ ಸಕ್ರಿಯವಾಗಿರುವ ರೈತ ಮತ್ತು ಕುಶಲಕರ್ಮಿ ಸಂಘಟನೆಗಳು ಮತ್ತು ಅವುಗಳೊಂದಿಗೆ ಮೈತ್ರಿ ಹೊಂದಿರುವ ಸಾಮಾಜಿಕ ಸಂಘಟನೆಗಳು ಮತ್ತು ವ್ಯಕ್ತಿಗಳಿಗೆ ಮನವಿ ಮಾಡಿಕೊಳ್ಳುತ್ತಿದ್ದೇವೆ: ಹೆಚ್ಚಿನ ಸಂಖ್ಯೆಯಲ್ಲಿ ಈ ಮಹಾಪಂಚಾಯತಿಯಲ್ಲಿ ಭಾಗವಹಿಸಿರೆಂದು. ಮುಂದುವರೆದು ನಮ್ಮೊಡನೆ ಸೇರಿ ಈ ಮಹಾಪಂಚಾಯತಿಯನ್ನು ಅಣಿಗೊಳಿಸುವುದಕ್ಕೆ ನಿಮ್ಮ ಅಮೂಲ್ಯವಾದ ತನು-ಮನ-ಧನಗಳ ಸಹಾಯವನ್ನೂ ಯಾಚಿಸುತ್ತೇವೆ. ಹೆಚ್ಚಿನ ಮಾಹಿತಿಗೆ ಕೆಳಕಂಡ ವ್ಯಕ್ತಿಗಳನ್ನು ದಯವಿಟ್ಟು ಸಂಪರ್ಕಿಸಿ.

ಈ ಮಹತ್ತರವಾದ ಬೇಡಿಕೆಯನ್ನು ತಮ್ಮ ಸುತ್ತಲಿನ ಸಾಮಾನ್ಯರು, ವೈಚಾರಿಕರು ಇತ್ಯಾದಿಗಳೊಂದಿಗೆ ಚರ್ಚಿಸಿ ಜನಾಭಿಮತವನ್ನು ದೃಡಗಳಿಸುವ ಕೆಲಸವನ್ನು ಮಾಡಲು ಮುಂದೆ ಬನ್ನಿ! ನಿಮ್ಮ ವಿಚಾರ ಮತ್ತು ಅನುಭವದ ಆಧಾರದ ಮೇಲೆ ಈ ಬೇಡಿಕೆಯ ಸಾಮಾಜಿಕ, ಆರ್ಥಿಕ, ದಾರ್ಶನಿಕ ಇತ್ಯಾದಿ ಪಕ್ಕಗಳನ್ನು ವಿಚಾರ ಮಾಡಿ, ತಿಳಿಗೊಳಿಸಿ, ಲೋಕವಿದ್ಯಾ ಸಮಾಜವನ್ನು ಶೋಷಣೆಯಿಂದ ಮುಕ್ತಿಗೊಳಿಸಲು ನಮ್ಮೊಡನೆ ಬನ್ನಿ.

ಹೆಚ್ಚಿನ ವಿವರಗಳಿಗೆ ಕೆಳಕಂಡ ವ್ಯಕ್ತಿಗಳನ್ನು ಸಂಪರ್ಕಿಸಿ

ಲೋಕವಿದ್ಯಾ ಜನ ಆಂದೋಲನ, ವಿದ್ಯಾ ಆಶ್ರಮದ ವಕ್ತಾರರು (ಹಿಂದಿ ಭಾಷೆ ಬಲ್ಲವರಿಗೆ)

ದಿಲೀಪ್ ಕುಮಾರ್ “ದಿಲಿ”                       ಪ್ರೇಮಲತಾ ಸಿಂಗ್                  ಲಕ್ಷ್ಮಣ ಪ್ರಾಸಾದ ಮೌರ್ಯ ವಾರಾಣಸಿ ಮಂಡಲ ಅಧ್ಯಕ್ಷರು                 ಸಂಪಾದಕಿ                           ವಾರಾಣಸಿ ಜಿಲ್ಲಾ ಅಧ್ಯಕ್ಷರು
ಭಾರತೀಯ ಕಿಸಾನ್ ಯೂನಿಯನ್            ಕಾರೀಗಾರ್ ನಜಾರಿಯ              ಭಾರತೀಯ ಕಿಸಾನ್ ಯೂನಿಯನ್
ph: 9452824380                              93691249998                       9026219913 

ಲೋಕವಿದ್ಯಾ ಜನ ಆಂದೋಲನ, ವಿದ್ಯಾ ಆಶ್ರಮದ ವಕ್ತಾರರು (ಕನ್ನಡ ಭಾಷೆ ಬಲ್ಲವರಿಗೆ)

ಜ. ಕ. ಸುರೇಶ: 98450 68404
ಜಿ. ಶಿವರಾಮಕೃಷ್ಣನ್: 87622 27604
 

 

No comments:

Post a Comment